Saturday 31 December 2016

ಭಕ್ತಿ.....

ಮಿತ್ರರೇ  ಒಂದು ಅದ್ಭುತ ವಿಚಾರದ ವಿಶ್ಲೇಷಣೆಯ ಸಂವಾದ ಈ ಕೆಳಗಿದೆ. ಓದಿ ಅನುಭವಿಸಿ ಮತ್ತು ಆನಂದಿಸಿ.

ನೈವೇದ್ಯ :  ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?

ಇದು ನಂಬಿಕೆಯಿಲ್ಲದವರ ಪ್ರಶ್ನೆ.  ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ.

ಒಬ್ಬ ಗುರು ಮತ್ತು  ಶಿಷ್ಯರ ಸಂವಾದ ಹೀಗೆ ನಡೆದಿತ್ತು.
 
ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು ‘ಪ್ರಸಾದ‘ ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ.

ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ  ತಯಾರಾಗಲು ಆದೇಶಿಸಿದರು. 

ಆ ದಿನ ಗುರುಗಳು ‘ಉಪನಿಷತ್ತು‘ ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ‘ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.  

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ  ಕಂಠಸ್ಥ ಹೇಳಿ, ಒಪ್ಪಿಸಿದ. 

ಆಗ, ಗುರುಗಳು ಮುಗುಳುನಗುತ್ತಾ ‘ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ‘ ಹೌದು ಗುರುಗಳೇ  ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ‘ ಎಂದು ಉತ್ತರಿಸಿದ.

" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು  " ನಿನ್ನ ಮನಸ್ಸಿನಲ್ಲಿರುವ ಪದಗಳು ‘ ಸೂಕ್ಷ್ಮ ಸ್ಥಿತಿಯಲ್ಲಿವೆ‘ ಮತ್ತು ಪುಸ್ತಕದಲ್ಲಿನ ಪದಗಳು ‘ಸ್ಥೂಲಸ್ಥಿತಿ‘ ಯಲ್ಲಿವೆ " ಎಂದರು. 

ಹಾಗೆಯೇ ಆ ದೇವರೂ ಸಹ ‘ ಸೂಕ್ಷ್ಮ ಸ್ಥಿತಿ‘ ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ ‘ಸ್ಥೂಲ ಸ್ಥಿತಿ‘ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.  

"ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ  ನೈವೇದ್ಯವನ್ನು ‘ ಪ್ರಸಾದ‘ ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ‘ ದೇವರಲ್ಲಿ‘ ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ.

ನಾವು ಉಣ್ಣುವ ಆಹಾರದಲ್ಲಿ ‘ಭಕ್ತಿ‘ ಹೊಕ್ಕರೆ
ಅದು ‘ ಪ್ರಸಾದ‘ ವಾಗುತ್ತದೆ.....

ನಮ್ಮ ಹಸಿವಿಗೆ ‘ಭಕ್ತಿ‘ ಹೊಕ್ಕರೆ
ಅದು ‘ ಉಪವಾಸ‘ ವಾಗುತ್ತದೆ...... 

ನಾವು ‘ಭಕ್ತಿ‘ ಕುಡಿದರೆ
ಅದು ‘ಚರಣಾಮೃತ‘ ವಾಗುತ್ತದೆ...... 

ನಮ್ಮ ಪ್ರಯಾಣ ‘ ಭಕ್ತಿ‘ ಪೂರ್ಣವಾದರೆ
ಅದು ‘ ತೀರ್ಥಯಾತ್ರೆ‘ ಯಾಗುತ್ತದೆ.......  

ನಾವು ಹಾಡುವ ಸಂಗೀತ‘ ಭಕ್ತಿ‘ ಮಯವಾದರೆ
ಅದು ‘ಕೀರ್ತನೆ‘ಯಾಗುತ್ತದೆ......

ನಮ್ಮ ವಾಸದ ಮನೆಯೊಳಕ್ಕೆ‘ ಭಕ್ತಿ ‘ ತುಂಬಿದರೆ
ನಮ್ಮ ಮನೆಯೇ ‘ ಮಂದಿರ ‘ ವಾಗುತ್ತದೆ.......

ನಮ್ಮ ಕ್ರಿಯೆ ‘ ಭಕ್ತಿ‘ ಪೂರಿತವಾದರೆ
ನಮ್ಮ ಕಾರ್ಯಗಳು ‘ ಸೇವೆ‘ ಯಾಗುತ್ತದೆ..... 

ನಾವು ಮಾಡುವ ಕೆಲಸದಲ್ಲಿ‘ ಭಕ್ತಿ ‘ ಇದ್ದರೆ
ಅದು ನಮ್ಮ ‘ ಕರ್ಮ ‘ ವಾಗುತ್ತದೆ..... 

ನಮ್ಮ ಹೃದಯದಲ್ಲಿ ‘ ಭಕ್ತಿ ‘ ತುಂಬಿದರೆ
ನಾವು ಮಾನವರಾಗುತ್ತೇವೆ.....

ನಮ್ಮ ವಿಚಾರವಿನಿಮಯದಲ್ಲಿ ‘ ಭಕ್ತಿ‘ ಇದ್ದರೆ
ಅದು ‘ ಸತ್ಸಂಗ‘ ವಾಗುತ್ತದೆ....  

ನಮಸ್ಕಾರ.....

Friday 30 December 2016

ಸತ್ಯ

A ನಿದು ಪ್ರಪಂಚದಲ್ಲಿ
B ಹೇವಿಯರ್ ಸರಿಯಿಲ್ಲ
C ರಿವಂತರಿಗೆ ಸೆನ್ಸ್ ಯಿಲ್ಲ
D ಗ್ರೀ ಮಾಡಿದರೂ ಪ್ರಯೋಜನವಿಲ್ಲ
E ngineering ಮಾಡೋನಾಂದ್ರೆ
F uture ಇಲ್ಲ
G ವನದಲ್ಲಿ ಜಿಗುಪ್ಸೆಯಾಗಿದೆ
H ಆಗಿರುವ ಜನಸಂಖ್ಯೆಯಲ್ಲಿ
I ಯೋ ಅನ್ನೋರಿಲ್ಲ
J ail ಗೆ ಹೋಗೋಣಾಂದ್ರೆ
K D ಗಳ ಸಾಮ್ರಾಜ್ಯ
L ಹೋದ್ರು ಬೇಜಾರು
M oney ಇಲ್ಲ ಅಂದ್ರೆ
N ನ್ನಂತವರಿಗೆ ಜಾಗವಿಲ್ಲ
O ಬ್ಬನೆ ಇರೋಣಂದ್ರೆ ಬೇಜಾರ್
P icture ಗೆ ಹೋಗಾಣಾಂದ್ರೆ
Q ನಲ್ಲಿ ನಿಲ್ಕಕ್ಕಾಗಲ್ಲ
R ಮಿಗೆ ಸೇರೋಣಾಂದ್ರೆ
S ಕೇಪ್ ಅಗೋಕಾಗಲ್ಲ
T V ನೋಡೋಣಾಂದ್ರೆ
U seless ಅಂತಾರೆ
V ಚಿತ್ರವಾದ
W orld ನಲ್ಲಿ
X ಪಿರಿಯೆನ್ಸಯಿಲ್ಲ
Y man?ಅನ್ನೊರಿಲ್ಲ
Z oo ನಲ್ಲಿರುವ ಪ್ರಾಣಿಯಂತಿರುವ ಮನುಷ್ಯ ...........?

ಅ ಮ್ಮನ ಮಡಿಲಿಂದ
ಆ ಎನ್ದು ಅಳುತ್ತಾ
ಇ ಲ್ಲಿಗೆ
ಈ ಸಬೇಕು
ಉ ಪಕಾರಿಯಾಗಿ
ಊ ರಿಗೆ
ಋ ಣಿಯಾಗಲು
ಎ ಷ್ಟೇ ಏಗಿದರೂ
ಐ ದಂಕಿ ಸಂಬಳಕ್ಕೆ
ಒ ಗ್ಗಟ್ಟಿನಿಂದ
ಓ ಟದ ಜೀವನದಲ್ಲಿ
ಔ ಡು ಗಚ್ಚಿ
ಅಂ ದದ ಬದುಕಿಕಾಗಿ
ಅಃ ಹರ್ನಿಶಿ
ಕ ಷ್ಟ ಪಟ್ಟು
ಖ ಗದಂತೆ ಹಾರಿ , ಮೃಗದಂತೆ
ಗ ಟ್ಟಿಯಾಗಿ
ಘ ರ್ಜಿಸಲು ಆಗದೆ
ಙ ಸ್ವರದಂತೆ ಏಕಾಂಗಿಯಾಗಿ
ಚ ಲಿಸಲು ಕಷ್ಟ ಪಡುತ್ತಾ
ಛ ತ್ರಿಯಂತೆ ಬಿಸಿಲಿಗೆ ಒಡ್ಡಿಕೊಳ್ಳುತ್ತಾ
ಜ ಗತ್ತಿನಲ್ಲಿ
ಝ ರಿಯಂತೆ
ಞ (ನ್ಯಾ)ಸಾಗುತ್ತಾ (ಚೌಕಟ್ಟು)
ಟ ಗರಿನ ಚರ್ಮದಂತೆ
ಠ ಕ್ಕತನಕ್ಕೆ ಒಳಗಾಗುತ್ತಾ
ಡ ಮರುಗದ ಶಬ್ಧಕ್ಕೆ
ಢ ವಡವ ಗುಡುತ್ತಾ ಹ
ಣ ಕ್ಕೆ ಣ ಕಾರ ಇಲ್ಲದೇ ಬರಿದೇ
ತ ತ್ತರಿಸುತ್ತಾ..
ಥ ರಥರನೆ ನಡುಗುತ್ತಾ..
ದ ನಕ್ಕಿಂತ ಕೀಳಾಗಿ
ಧ ನಕ್ಕೆ ಆಳಾಗಿ ಕಿರು
ನ ಗುವಿನಾ ನೆಮ್ಮದಿಗೆ ಹಂಬಲಿಸುತ್ತಾ
ಪ ರಿಸರಕ್ಕೆ
ಫ ಲವಾಗದೇ (ಪೂರಕವಾಗದೇ)
ಬ ರಿದೇ
ಭಂಡ
ಮ ನುಷ್ಯನಾಗಿ
ಯ ಮನಿಗೆ ತನ್ನನ್ನು
ರ ಕ್ಷಿಸು ಎಂದು ಸಾವಿನ
ವ ರ ಬಯಸುತ್ತಾ ಕೊನೆಗೆ
ಶ ವವಾಗಲು
ಸ ಮಯ ಕಾಯುತ್ತಾ
ಹ ಗಲಿರು
ಳ ಲ್ಲೂ
ಕ್ಷ ಣ ಬದುಕಿ ಸಾಯುವ ನಮ್ಮ ಜೀವನ...ಅ ಯಿಂದ ಕ್ಷ ಅಷ್ಟೇ..

Tuesday 27 December 2016

ನಗೆ ನೀನೇ ಗೆಳೆಯ ನಿನಗೆ ನೀನೇ,

ನಗೆ ನೀನೇ ಗೆಳೆಯ ನಿನಗೆ ನೀನೇ,

ಅವರಿವರ ನಂಬುಗೆಯ ಮಳಲರಾಶಿಯ ಮೇಲೆ

ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?

ನಿನಗೆ ನೀನೇ,ಗೆಳೆಯ ನಿನಗೆ ನೀನೇ!

ಮನಸಿಡಿದು ಹೋಳಾಗುತಿರುವ ವೇಳೆ

ಕನಸುಗಳ ಗುಳ್ಳೆಗಳು ಒಡೆದೊಡೆದು ಬೀಳೆ,

ಜನುಮದೀ ರಿಂಗಣದ ಕಾಲುಗಳು ಸೋಲೆ

ನಿನಗೆ ನೀನೇ,ಗೆಳೆಯ ನಿನಗೆ ನೀನೇ!

ತೋಟದಲಿ ಗಿಡಗಿಡಕೆ ಹೂವರಳಿ ನಿಲ್ಲೆ,

ಮಕರಂದದುತ್ಸವವು ಬಿತ್ತರಿಸುವಲ್ಲೆ

ಮರಿದುಂಬಿ ಸಾಲೇನು,ಅರಗಿಳಿಯ ಮಾಲೆ!

ಬರೆ ಮಾಗಿ,ಬರಿ ತೋಟ, ಭಣಗುಡುವುದಲ್ಲೆ!

ನಿನ್ನ ಬಗೆ ನಗೆಯಾಗಿ ಹರಿದು ಬರುತಿರಲು,

ಸಂತಸದ ಸಂಗೀತ ಹೊನಲಿಡುತಲಿರಲು,

ಏನೊಲವು, ಏನು ಕಳೆ,ಎಂಥ ಸುಮ್ಮಾನ!

ಏನಾಟ,ಏನೂಟ ಎಂಥ ಸಮ್ಮಾನ

ನಿನ್ನ ಕರುಳನು ಕೊರಗು ಹುಳು ಕಡಿಯುತಿರಲು

ನಿನ್ನ ಮನದಿ ನಿರಾಶೆ ಮಂಜು ಮುಸುಕಿರಲು,

ಮೊಗದಿ ಕಾರ್ಮುಗಿಲೋಳಿ ದಾಳಿಗೊಂಡಿರಲು

ಎಲ್ಲೊಲವು,ಎಲ್ಲಿ ಕಳೆ ಎಲ್ಲಿ ಸುಮ್ಮಾನ?

ನಿನಗೆ ನೀನೆ ತ್ರಾಣ ಮಾನ ಸಮ್ಮಾನ.

ಜಗವೆಲ್ಲ ನಗೆಯ ಹೊಳೆಯಾಗಿ ಗುಳುಗುಳಿಸೆ

ಸೊಗವಲ್ಲಿ,ಸೊಗವಿಲ್ಲಿ, ಬಂದು ಗಮಗಮಿಸೆ

ಹುಣ್ಣಿಮೆಯ ದಿನದ ಗವಿಯೊಡಲಂತೆ ಮನವು

ತನ್ನ ಕತ್ತಲೆಗಂಜಿ ತನ್ನೊಳಡಗಿರಲು,

ನಿನಗೆ ನೀನೇ ಗೆಳೆಯ,ನಿನಗೆ ನೀನೇ!

ಕವಲುದಾರಿಯ ಮುಂದೆ ನೀ ಬಂದು ನಿಂದು

ಗುರಿಯಾವುದೆಂದು ಮುಂಗಾಣದಿರೆ ನೊಂದು

ಮನದ ಪೊರೆಪೊರೆಯೊಳುರಿಯೆದ್ದು ಭುಗಿಲಿಡಲು,

ನಿನಗೆ ನೀನೇ ಗೆಳೆಯ ನಿನಗೆ ನೀನೇ!

ನೀನೆ ನಿನ್ನಯ ಬಂಧು ನೀ ನಿನ್ನ ಶತ್ರು,

ನೀ ರಸಿಕ,ನೀನೇ ಹಾ! ರಸಿಕತೆಯ ವಸ್ತು;

ಸ್ವರ್ಗ ನರಕದ ಅಳವುನಲವುಗಳು ಬಿತ್ತು,

ನೀನೆ ಬಾಳುವೆಯಿರುಳು,ನೀ ನಿನ್ನ ಹೊತ್ತು;

ನಿನ್ನೆದೆಯ ಪಾಡೆ ನಿನ್ನೊಲಯಿಸುವ ಹಾಡು;

ನಿನ್ನೊಡಲ ನಾಡೆ ನಿನೈಸಿರಿಯ ಬೀಡು,

ನಿನಗೆ ನೀನೇ ಗೆಳೆಯ ನಿನಗೆ ನೀನೇ!

ಬಾಳ ಕಾಳಗದಲ್ಲಿ ಏಕಾಂಗಿ ವೀರ!

ನೇಹನಲುಮೆಗಳೆದೆಗೆ ಬರಿಯ ಆಹಾರ!

ನಿನ್ನ ಅಂತ:ಸತ್ವ ಸಾರ ಆಧಾರ!

ಉಳಿದೆಲ್ಲವು ಬೆಸಕೆ ಬರದ ಸಿಂಗಾರ!

ನಿನ್ನಾತ್ಮದಿದಿರು ನೀ ನಿಂತಿರುವ ವೇಳೆ;

ಆತ್ಮ ಸಾಕ್ಷಿಗೆ ಸಾಕ್ಷಿಗುಡುತಲಿರೆ ಬಾಳೆ;

ಮೃತ್ಯುವಿನ ಹಿಡಿತ ಬಿಗಿಯಾಗುತಿರೆ ಮೇಲೆ

ಕಿರುತಾರಗೆಯದೊಂದು ಓರಗೆಯ ಕೋರೆ

ನಿನಗೆ ನೀನೇ,ಗೆಳೆಯ ನಿನಗೇ ನೀನೇ!

ದೂರದೂರದ ಮಾತು,ಗೀತ ಹರಿತಂದು,

ಮರೆತ ಬಾಳಿನ ಕುದಿತ ಮನದಿ ನೆಲೆನಿಂದು,

ಭವಬಣ್ಣ ಗಾಜೊಳಗಾಗ ದಿವದ

ಸಪ್ತವರ್ಣದ ಕಾಂತಿ ಕೋರೈಸೆ ಕಣ್ಣ,

ಬಳಿಕೆಲ್ಲ ಬಾಳುದ್ದ ಕಾರಿರುಳು ಕವಿಯೆ,

ನಿನಗೆ ನೀನೇ ಗೆಳೆಯ,ನಿನಗೆ ನೀನೇ!

ಒಂಟಿ ಮುಗಿಲದೊ ನೋಡು,ಬಾನ ಬಯಲಿನಲಿ

ತನ್ನೆದೆಯ ರಸದಲ್ಲಿ ತಾನೆ ಕರಕರಗಿ,

ತನ್ನೆದೆಯ ಹಾಡೊಳು ತನ್ನ ಮೈಮರೆಸಿ

ಯಾವೆಡೆಗೆ ಸಾಗುತಿದೆ ಏನನಾಧರಿಸಿ?

ಆ ಹಾರು ಹಕ್ಕಿಯನು ಕಂಡಿಲ್ಲವೇನು?

ಯಾವ ಮರ,ಯಾವ ಗಿಡವೆಲ್ಲಾದರೇನು?

ತನ್ನ ರೆಕ್ಕೆಯ ನಂಬುಗೆಯನೊಂದೆ ಬೆಳೆದು

ತನ್ನ ಬಾಳನು ತನ್ನ ಹಿಡಿತದಲಿ ಬಿಗಿದು

ತನ್ನ ಪಾಡನು ತಾನೆ ಸವಿಸವಿದು

ಸಾಗುತಿದೆಯಲ್ಲ;ಅದಕಿನ್ನಾವ ನೆಚ್ಚು?

ನಿನ್ನೆದೆಯ ಬಲವೊಂದೆ ನಿನ್ನ ಬೆಂಬಲವು;

ನಿನ್ನ ಚಿತ್ಕಳೆಯೊಂದೆ ನಿನ್ನ ಹಂಬಲವು

ನಿನ್ನೆದೆಯ ಮಧುರಿಮೆಯೆ,ನಿನ್ನೊಲವಿನುರಿಯೆ;

ನಿನ್ನ ತ್ಯಾಗದ ಸೊಗವೆ,ರಾಗದುಬ್ಬೆಗವೆ;

ನಿನ್ನೆದೆಯನೇ ಹಿಳಿದು ಹಿಳಿದುದನು ಮೆದ್ದು,

(ನಿನ್ನೊಡಲ ಯಾತನೆಗೆ ಅದೆ ಹಿರಿಯ ಮದ್ದು!!)

ನಿನ್ನ ಮರುಕದ ಅಗ್ನಿದಿವ್ಯದಲಿ ಗೆದ್ದು,

ಮೇಲೆ ಬಾ, ಹೂವಾಗಿ ಜೇನಾಗಿ ಪುಟಿದು

ತೇಲಿ ಬಾ, ಬೆಳ್ಮುಗಿಲ ತುಣುಕಾಗಿ ನೆಗೆದು

ಬಾನೆತ್ತರಕು ಜಗದ ಬಿತ್ತರಕು ಬೆಳೆದು,

ಅದೆ ಸಾಧನೆಯ ಸಾಧ್ಯ; ಅದೆ ಬಾಳಿನೊಸುಗೆ;

ನಿನಗೆ ನೀನೇ ಕೊನೆಗು ನೀನೇ ನಿನಗೆ!

Sunday 25 December 2016

ಅಬ್ದುಲ್ ಕಲಾಂ ಅವರ 24 ಆಯ್ದ ಹಿತನುಡಿಗಳು

```1) ನಿನ್ನ ಕನಸು ನನಸಾಗಬೇಕಿದ್ದರೆ.. ಮೊದಲು ನೀನು ಕನಸು ಕಾಣು..

2) ನಿದ್ದೆಯಲ್ಲಿ ಕಾಣುವುದಲ್ಲ .. ನಿದ್ದೆಗೆಡಿಸಿ ಕಾಡುವುದು

3) ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ

4) ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು..

5) ಸೋಲಿನ ಕತೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ ..

6) ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು..

7) ನಮ್ಮ ಮಕ್ಕಳ ಉತ್ತಮ ನಾಳೆಗಾಗಿ ನಮ್ಮ ಇಂದನ್ನು ತ್ಯಾಗ ಮಾಡೋಣ..

8) ಯಾವುದೇ ಸಮಸ್ಯೆಗೂ ಯುದ್ಧ ಅಂತಿಮ ಪರಿಹಾರವಲ್ಲ..

9) ಅತೀ ಸಂತೋಷ ಅಥವಾ ಅತೀ ದುಃಖವಾದಾಗ ಮಾತ್ರ ಕವನ ಸೃಷ್ಟಿ

10) ಯುವಕರು ಕೆಲಸ ಹುಡುಕಬಾರದು.. ಕೆಲಸ ಉತ್ಪಾದಕರಾಗಬೇಕು

11) ವಿಜ್ಞಾನ ಮಾನವೀಯತೆಗೆ ಸುಂದರ ಉಡುಗೊರೆ. ನಾವು ಅದನ್ನು ವಿರೂಪಗೊಳಿಸಬಾರದು

12) ಮಳೆ ಬಂದಾಗ ಎಲ್ಲ ಹಕ್ಕಿಗಳು ಮರದ ಆಶ್ರಯ ಪಡೆಯುತ್ತವೆ. ಆದರೆ ಹದ್ದುಗಳು ಮೋಡದಿಂದಲೂ ಮೇಲಕ್ಕೆ ಹೋಗಿ ಹಾರಾಡುತ್ತವೆ. ಸಮಸ್ಯೆ ಎಲ್ಲರಿಗೂ ಇದೆ. ಆದರೆ ಅದನ್ನು ಹೇಗೆ ಎದುರಿಸ್ತೀರಿ ಎನ್ನುವುದು ಮುಖ್ಯ

13) ಯಾವುದರಲ್ಲೂ ತೊಡಗಿಸಿಕೊಳ್ಳದೇ ಇದ್ದರೆ ನೀವು ಯಶಸ್ವಿಯಾಗಲ್ಲ. ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಸೋಲಲ್ಲ

14) ನಮಗೆಲ್ಲರಿಗೂ ಒಂದೇ ಪ್ರತಿಭೆ ಹೊಂದಿಲ್ಲ. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿರುತ್ತೆ

15) ಸೂರ್ಯನಂತೆ ಪ್ರಜ್ವಲಿಸಬೇಕಿದ್ದರೆ, ಸೂರ್ಯನಂತೆ ಮೊದಲು ಉರಿಯಬೇಕು

16) ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ. ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ, ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ

17) ಕೆಲವರನ್ನು ಸೋಲಿಸುವುದು ಭಾರೀ ಸುಲಭ. ಆದ್ರೆ ಕೆಲವರನ್ನು ಗೆಲ್ಲುವುದು ಭಾರೀ ಕಷ್ಟ

18) ನೀವು ಮಾಡುವ ಕೆಲಸವನ್ನು ಪ್ರೀತಿಸಿ, ಶ್ರದ್ಧೆಯಿಂದ ಕೆಲಸ ಮಾಡಿ ಆತ್ಮಶುದ್ಧಿ ಮಾಡಿಕೊಳ್ಳಿ..

19) ನಿಮ್ಮ ಭವಿಷ್ಯ ಬದಲಾಗಬೇಕಾದ್ರೆ, ಮೊದಲು ನಿಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಿ..

20) ಸ್ಪಷ್ಟ ಗುರಿ.. ವಿಷಯ ಜ್ಞಾನ.. ನಿರಂತರ ಶ್ರಮ.. ಅಧ್ಯಯನ ಶೀಲತೆ

21) ಜೀವನ ಮತ್ತು ಸಮಯ ನಮ್ಮ ಉತ್ತಮ ಶಿಕ್ಷಕರು

22) ಜೀವನ ನಮ್ಮ ಗುರಿಯನ್ನು ನಿರ್ದೇಶಿಸುತ್ತದೆ. ಸಮಯ ಜೀವನದ ಮೌಲ್ಯವನ್ನು ನಿರ್ಧರಿಸುತ್ತದೆ

23) ನಾವು ಸ್ವತಂತ್ರರಾಗದಿದ್ದರೆ, ಯಾರೂ ಗೌರವಿಸುವುದಿಲ್ಲ

24) ನಿನ್ನ ತಪ್ಪುಗಳೇ ನಿನ್ನ ನಿಜವಾದ ಗುರು```

ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು

ಜನೆವರಿ
01 - ವಿಶ್ವ ಶಾಂತಿ ದಿನ.
02 - ವಿಶ್ವ ನಗುವಿನ ದಿನ.
12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 - ಭೂ ಸೇನಾ ದಿನಾಚರಣೆ.
25 - ಅಂತರರಾಷ್ಟ್ರೀಯ ತೆರಿಗೆ ದಿನ.
28 - ಸರ್ವೋಚ್ಛ ನ್ಯಾಯಾಲಯ ದಿನ.
30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)
ಫೆಬ್ರುವರಿ  
21- ವಿಶ್ವ ಮಾತೃಭಾಷಾ ದಿನ.
22 - ಸ್ಕೌಟ್ & ಗೈಡ್ಸ್ ದಿನ.
23 - ವಿಶ್ವ ಹವಾಮಾನ ದಿ.
28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.
ಮಾರ್ಚ
08 - ಅಂತರಾಷ್ಟ್ರೀಯ ಮಹಿಳಾ ದಿನ.
12 - ದಂಡಿ ಸತ್ಯಾಗ್ರಹ ದಿನ.
15 - ವಿಶ್ವ ಬಳಕೆದಾರರ ದಿನ.
21 - ವಿಶ್ವ ಅರಣ್ಯ ದಿನ.
22 - ವಿಶ್ವ ಜಲ ದಿನ.
ಏಪ್ರಿಲ್
01 - ವಿಶ್ವ ಮೂರ್ಖರ ದಿನ.
07 - ವಿಶ್ವ ಆರೋಗ್ಯ ದಿನ.
14 - ಡಾ. ಅಂಬೇಡ್ಕರ್ ಜಯಂತಿ.
22 - ವಿಶ್ವ ಭೂದಿನ.
23 - ವಿಶ್ವ ಪುಸ್ತಕ ದಿನ.
ಮೇ
01 - ಕಾರ್ಮಿಕರ ದಿನ.
02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 - ರಾಷ್ಟ್ರೀಯ ಶ್ರಮಿಕರ ದಿನ.
08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 - ಅಂತರಾಷ್ಟ್ರೀಯ ಕುಟುಂಬ ದಿನ.
ಜೂನ್
05 - ವಿಶ್ವ ಪರಿಸರ ದಿನ.(1973)
14 - ವಿಶ್ವ ರಕ್ತ ದಾನಿಗಳ ದಿನ
26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.
ಜುಲೈ
01 - ರಾಷ್ಟ್ರೀಯ ವೈದ್ಯರ ದಿನ.
11 - ವಿಶ್ವ ಜನಸಂಖ್ಯಾ ದಿನ.
ಅಗಷ್ಟ್
06 - ಹಿರೋಶಿಮಾ ದಿನ.
09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.
15 - ಸ್ವಾತಂತ್ರ್ಯ ದಿನಾಚರಣೆ.
29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.
ಸೆಪ್ಟೆಂಬರ್
05 - ಶಿಕ್ಷಕರ ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ)
08 - ವಿಶ್ವ ಸಾಕ್ಷರತಾ ದಿನ
14 - ಹಿಂದಿ ದಿನ(ಹಿಂದಿ ದಿವಸ್ 1949)
15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ.
16 - ವಿಶ್ವ ಓಝೋನ್ ದಿನ.
28 - ವಿಶ್ವ ಹೃದಯ ದಿನ.
ಅಕ್ಟೋಬರ್
02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
05 - ವಿಶ್ವ ಶಿಕ್ಷಕರ ದಿನ.
08 - ವಾಯು ಸೇನಾ ದಿನ
09 - ವಿಶ್ವ ಅಂಚೆ ದಿನ.
10 - ವಿಶ್ವ ಮಾನಸಿಕ ಆರೋಗ್ಯ ದಿನ.
16 - ವಿಶ್ವ ಆಹಾರ ದಿನ.
24 - ವಿಶ್ವ ಸಂಸ್ಥೆಯ ದಿನ.
31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)
ನವೆಂಬರ್
01 - ಕನ್ನಡ ರಾಜ್ಯೋತ್ಸವ ದಿನ
14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.